ಲಕ್ನೋ: ಉತ್ತರಪ್ರದೇಶದ ಲಕ್ನೋ ಜಿಲ್ಲೆಯ ಚಿನ್‌ಹ್ಯಾಟ್‌ಪೋಲಿಸ್ ಸ್ಟೇಷನ್ ಪ್ರದೇಶದ ದೇವಾ ರಸ್ತೆಯಲ್ಲಿರುವ ಆಮ್ಲಜನಕ ಅನಿಲ ಭರ್ತಿ ಕೇಂದ್ರದಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡು ಕನಿಷ್ಟ ಮೂವರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಗುರುತನ್ನು ಪತ್ತೆ ಹಚ್ಚಲಾಗಿಲ್ಲ.

ಘಟನಾ ಸ್ಥಳಕ್ಕೆ ಮೊದಲಿಗೆ ತಲುಪಿದ ಲಕ್ನೋ ಪೊಲೀಸ್ ಕಮಿಷನರ್, ಡಿ.ಕೆ. ಠಾಕೂರ್, ಘಟನೆಯಿಂದ ಮೂರು ಸಾವು ಸಂಭವಿಸಿದೆ ಎಂದು ದೃಢಪಡಿಸಿದರು.

ರೋಗಿಗಳ ರಕ್ತಸಂಬಂಧಿಗಳಲ್ಲಿ ಒಬ್ಬರ ಜಂಬೋ ಆಕ್ಸಿಜನ್ ಸಿಲಿಂಡರ್ ಮರುಪೂರಣಕ್ಕೆ ತಂದಾಗ ಅದು ದೋಷಪೂರಿತವಾಗಿತ್ತು ಎಂದು ತೋರುತ್ತದೆ, ಇದು ಸ್ಫೋಟಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು.

ಸ್ಫೋಟದ ನಿಖರ ಕಾರಣವನ್ನು ಕಂಡುಹಿಡಿಯಲು ಮುಖ್ಯ ಅಗ್ನಿಶಾಮಕ ಅಧಿಕಾರಿಯ ತಾಂತ್ರಿಕ ತಂಡವನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

Source: Vartha Bharathi

You Might Also Like

" data-numposts="10" data-width="">