ನವದೆಹಲಿ, ಡಿ.7- ತಮ್ಮ ಸಂಸ್ಥೆ ಸಂಶೋಧಿಸಿರುವ ಕೊರೊನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಪೂನಾ ಮೂಲದ ಸೆರಂ ಸಂಸ್ಥೆ ಭಾರತೀಯ ಡ್ರಗ್ಸ್ ಕಂಟ್ರೋಲರ್‍ಗೆ ಮನವಿ ಮಾಡಿಕೊಂಡಿದೆ.

ಆಕ್ಸಫರ್ಡ್ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಕೊರೊನಾ ಲಸಿಕೆ ತಯಾರಿಸುತ್ತಿರುವ ಸೆರಂ ಸಂಸ್ಥೆ ತಾವು ತಯಾರಿಸಿರುವ ಲಸಿಕೆ ಬಳಸಲು ಯೋಗ್ಯವಾಗಿದ್ದು , ಇದಕ್ಕೆ ಅನುಮತಿ ನೀಡುವಂತೆ ಡ್ರಗ್ಸ್ ಕಂಟ್ರೋಲರ್‍ಗೆ ಮನವಿ ಮಾಡಿಕೊಂಡಿದೆ ಎಂದು ಸಿಇಒ ಅದರ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

ಭಾರತೀಯ ಸಂಸ್ಥೆ ತಯಾರಿಸಿರುವ ಮೊದಲ ಕೊರೊನಾ ಲಸಿಕೆ ವರ್ಷಾಂತ್ಯದ ವೇಳೆಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು , ಸೋಂಕಿನಿಂದ ಬಳಲುತ್ತಿರುವವರಿಗೆ ನಮ್ಮ ಔಷಧಿ ವರದಾನವಾಗಿ ಪರಿಣಮಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊರೊನಾ ಲಸಿಕೆ ಹೊರ ತರುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ ಸಹಕಾರವನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ಪೂನಾವಾಲಾ ಸ್ಮರಿಸಿಕೊಂಡಿದ್ದಾರೆ.

 

You Might Also Like

" data-numposts="10" data-width="">