ಕುಣಿಗಲ್ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಮೀವುಲ್ಲಾ ಅವಿರೋಧವಾಗಿ ಆಯ್ಕೆ ಆದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಣದಲ್ಲಿ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಶಾಸಕರಾದ ಡಾ. ರಂಗನಾಥ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಮೀವುಲ್ಲಾ; ಎಲ್ಲಾ ಸದಸ್ಯರು ಒಮ್ಮತದಿಂದ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅಧ್ಯಕ್ಷರು ಹಾಗೂ ಸದಸ್ಯರು ಶಾಸಕರೊಂದಿಗೆ ಚರ್ಚಿಸಿ ಅಭಿರುದ್ಧಿ ಕಾರ್ಯ ಕೈಗೊಳ್ಳಲು ಜೊತೆಯಲ್ಲಿ ಕುಡಿಯುವ ನೀರು ರಸ್ತೆ ಚರಂಡಿ ಕಸವಿಲೇವಾರಿ ಹೆಚ್ಚಿನ ಆದ್ಯತೆ ನೀಡಿ ಶ್ರಮಿಸುವುದಾಗಿ ತಿಳಿಸಿದರು.
ಪುರಸಭಾ ಅಧ್ಯಕ್ಷ ಕೆ. ಎಸ್ ನಾಗೇಂದ್ರ, ಉಪಾಧ್ಯಕ್ಷೆ, ಮಂಜುಳಾ, ಸಿ.ಒ. ರವಿಕುಮಾರ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

You Might Also Like

" data-numposts="10" data-width="">