ನವದೆಹಲಿ: ಮುಖೇಶ್​ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್​ ಭಾರತದ ದಿಗ್ಗಜ ಕಂಪನಿ ಎನಿಸಿದೆ. ಗುರುವಾರ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಮೌಲ್ಯ ಶೇ.6.2 ಹೆಚ್ಚಾಗುತ್ತಿದ್ದಂತೆ, ಹೊಸ ದಾಖಲೆಯನ್ನೇ ಬರೆದಿದೆ.

ತೈಲದಿಂದ ಟೆಲಿಕಾಮ್​ವರೆಗೆ ಹರಡಿಕೊಂಡಿರುವ ರಿಲಯನ್ಸ್​ ಕಂಪನಿ ಮಾರುಕಟ್ಟೆ ಬಂಡವಾಳ ಮೌಲ್ಯವು 200 ಬಿಲಿಯನ್​ ಡಾಲರ್​ಗೂ ಹೆಚ್ಚಾಗಿದೆ. ಈ ಶ್ರೇಯ ಪಡೆದ ಭಾರತದ ಮೊದಲ ಕಂಪನಿ ಇದಾಗಿದೆ. ಜತೆಗೆ, ಎರಡನೇ ಸ್ಥಾನದಲ್ಲಿರುವ ಕಂಪನಿಗಿಂತ ಇದರ ಗಾತ್ರ ದುಪ್ಪಟ್ಟಾಗಿದೆ.

ರಿಲಯನ್ಸ್​ ಕಂಪನಿಗೆ ಬಂಡವಾಳದ ಮಹಾಪೂರವೇ ಹರಿದು ಬರುತ್ತಿದೆ. ಹೀಗಾಗಿ ಕಂಪನಿಯ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪ್ರತಿ ಷೇರಿನ ಬೆಲೆ 2,343.90 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಇದರ ಮಾರುಕಟ್ಟೆ ಬಂಡವಾಳ 14.68 ಲಕ್ಷ ಕೋಟಿ ರೂ. ( 200.68 ಬಿಲಯನ್​ ಡಾಲರ್​) ಆಗಿದೆ.
ಎರಡನೇ ಸ್ಥಾನದಲ್ಲಿರುವ ಟಿಸಿಎಸ್​ ಕಂಪನಿಯ ಮಾರುಕಟ್ಟೆ ಬಂಡವಾಳ ಪ್ರಮಾಣ 119 ಬಿಲಿಯನ್​ ಡಾಲರ್​ಗೆ ಹೋಲಿಸಿದಲ್ಲಿ ಇದು ಎರಡು ಪಟ್ಟು ಹೆಚ್ಚಾಗಿದೆ ಎಂದೇ ಹೇಳಬಹುದು.

ಫೇಸ್​ಬುಕ್​-ಗೂಗಲ್​ನಿಂದ 20 ಬಿಲಿಯನ್​ ಬಂಡವಾಳ ಪಡೆದ ಬೆನ್ನಲ್ಲೇ, ಇತ್ತೀಚೆಗೆ ಸಿಲ್ವರ್​ ಲೇಕ್​ ಕಂಪನಿ 1 ಬಿಲಿಯನ್​ ಡಾಲರ್​ ಹೂಡಿಕೆ ಮಾಡಿದೆ. ಜತೆಗೆ ಅಮೆರಿಕದ ಕೆಕೆಆರ್​, ಅಬುದಾಬಿ, ದುಬೈನ ಹಲವು ಕಂಪನಿಗಳು ಹೂಡಿಕೆಗೆ ಮುಂದಾಗಿವೆ.

ಇನ್ನೊಂದೆಡೆ, ರಿಲಯನ್ಸ್​ನಲ್ಲಿ 1.46 ಲಕ್ಷ ಕೋಟಿ ರೂ. (20 ಬಿಲಿಯನ್​ ಡಾಲರ್​) ಹೂಡಿಕೆ ಮಾಡಲು ಅಮೆಜಾನ್​ ಮಾತುಕತೆ ನಡೆಸುತ್ತಿದೆ. ಹೀಗಾದಲ್ಲಿ ಕಂಪನಿಯ ಷೇರು ಮೌಲ್ಯ 2,464ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

You Might Also Like

" data-numposts="10" data-width="">