ಲಂಡನ್, ಡಿ.2- ಇಡೀ ವಿಶ್ವದಾದ್ಯಂತ ಕೋವಿಡ್ ಲಸಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಬ್ರಿಟನ್‍ನಲ್ಲಿ ಮುಂದಿನ ವಾರದಿಂದ ಲಸಿಕೆ ಬಿಡುಗಡೆ ಮಾಡಲಿದೆ. ಫಿಜರ್ ಮತ್ತು ಬಯೋನೆಟಿಕ್ ಸಂಸ್ಥೆಗಳು ತಯಾರಿಸಿರುವ ಲಸಿಕೆ ಫಲಿತಾಂಶ ಪ್ರಕಟಿಸಿದ್ದು, ಇದು ಜನರಿಗೆ ವಿತರಿಸಲು ಸುರಕ್ಷಿತವಾಗಿದೆ ಎಂದು ವಿತರಣೆಗೆ ಬ್ರಿಟನ್ ಸರ್ಕಾರ ಅನುಮತಿ ನೀಡಿದೆ.

ಇದು ಇಡೀ ವಿಶ್ವದಲ್ಲೇ ಕೋವಿಡ್‍ಗೆ ಲಸಿಕೆ ಬಿಡುಗಡೆ ಮಾಡಿದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಬ್ರಿಟನ್ ಕಾರಣವಾಗಿದೆ. ಬ್ರಿಟನ್‍ನ ಔಷಧ ಮತ್ತು ಆರೋಗ್ಯ ವರ್ಧಕ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್‍ಆರ್‍ಎ) ಲಸಿಕೆ ಬಗ್ಗೆ ನಮಗೆ ವಿಶ್ವಾಸವಿದೆ. ಈಗಾಗಲೇ ರೋಗಿಗಳ ಮೇಲೆ ಹಾಗೂ ವೈಜ್ಞಾನಿಕ ಪ್ರಯೋಗದಲ್ಲಿ ಶೇ.95ರಷ್ಟು ಪರಿಣಾಮ ಬೀರಿದೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದೆ.

ಅಮೆರಿಕ ಮೂಲದ ಫಿಜರ್ ಮತ್ತು ಜರ್ಮ ಮೂಲದ ಬಯೋನೆಟಿಕ್ ಸಂಸ್ಥೆಗಳು ಜತೆಯಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಎಲ್ಲಾ ವಯೋಮಾನದ ಜನರಿಗೂ ಇದನ್ನು ಬಳಸಬಹುದು ಎಂದು ತಿಳಿಸಿದೆ. ಈ ಸಂಬಂಧ ಬ್ರಿಟನ್ ಸರ್ಕಾರ ಎಂಎಚ್‍ಆರ್‍ಎಗೆ ಇದರ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿತ್ತು. ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ ನಂತರ ಇದು ಅತ್ಯುತ್ತಮ ಎಂದು ಪ್ರಮಾಣಿಕರಿಸಲಾಗಿದೆ.

ಈ ಲಸಿಕೆಯನ್ನು 8 ಡಿಗ್ರಿ ಸೆಲ್ಸಿಯನ್ಸ್‍ನಲ್ಲಿ ಶೇಖರನೆ ಮಾಡಬೇಕು. ಇದನ್ನು ರೋಗಿಗಳಿಗೆ ನೀಡಿದಾಗ ಐದು ದಿನಗಳಲ್ಲಿ ಪರಿಣಾಮ ಬೀರಲಿದೆ. ಇದರಿಂದ ಯಾವ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಕೂಡ ತಿಳಿಸಲಾಗಿದೆ.

 

You Might Also Like

" data-numposts="10" data-width="">