ಬೆಂಗಳೂರು, ಆ.23: ಫುಡ್ ಫ್ಯಾಕ್ಟರಿಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದರಿಂದ ಇಬ್ಬರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ. ಅವಘಡದಲ್ಲಿ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು ಬಿಹಾರ ಮೂಲದ ಕಾರ್ಮಿಕ ಮನೀಶ್ ಹಾಗೂ ಸೌರಭ್ ಎಂದು ಗುರುತಿಸಲಾಗಿದೆ. ಶಾಂತಿ, ಧನಲಕ್ಷ್ಮೀ ಹಾಗೂ ಸಚಿನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರೆನ್ನಲಾಗಿದೆ.

ಮಾಗಡಿ ರಸ್ತೆಯಲ್ಲಿರುವ ಎಂ.ಎಂ.ಫುಡ್ ಫ್ಯಾಕ್ಟರಿಯಲ್ಲಿ ಈ ಅವಘಡ ಸಂಭವಿಸಿದೆ. ಬಾಯ್ಲರ್ ಸ್ಫೋಟದ ಸಂದರ್ಭ ಫ್ಯಾಕ್ಟರಿಯಲ್ಲಿ ಏಳು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಸಜೀವ ದಹನಗೊಂಡಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.

ಮೊಕದ್ದಮೆ ದಾಖಲು

ದುರ್ಘಟನೆ ಸಂಬಂಧ ಕಟ್ಟಡದ ಮಾಲಕ ಹಾಗೂ ಎಂಎಂ ಆಹಾರ ಕಾರ್ಖಾನೆ ಮಾಲಕರು ಸೇರಿ ಮೂವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಕಟ್ಟಡದ ಮಾಲಕ ನರೇಂದ್ರ, ಕಾರ್ಖಾನೆ ಮಾಲಕರಾದ ವಿಜಯ್ ಮೆಹ್ತಾ ಹಾಗೂ ಸಚಿನ್ ಎಂಬುವರ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Source: Vartha Bharati

You Might Also Like

" data-numposts="10" data-width="">