ಬೆಂಗಳೂರು : ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ನಾಡಿನಾದ್ಯಂತ ಮನೆಮಾತಾಗಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಇದೀಗ ಕೋವಿಡ್ ಸೋಂಕಿತರಿಗಾಗಿಯೇ ಕೋವಿಡ್ ಕೇರ್ ಸೆಂಟರ್ ಆರಂಭಿಸಿ ನೊಂದವರ ಪಾಲಿಗೆ ಆಪಾದ್ಬವ ಎನಿಸಿದೆ. ಬೆಂಗಳೂರಿನ ವಿಜಯನಗರದ ಶ್ರೀ ಕಾಲಭೈರವೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್.ನಂಬರ್ 10 , ಪೈಪ್ ಲೈನ್ ರಸ್ತೆ , ಎರಡನೇಹಂತದಲ್ಲಿ ಸುಮಾರು 100 ಹಾಸಿಗೆಯ ಸಾಮಾಥ್ಯ9ದ ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗಿದೆ.

ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಈ ಕೋವಿಡ್ ಕೇರ್ ಸೆಂಟರ್ ಅನ್ನು‌ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಶ್ರೀ ಶ್ರೀ ಸೌಮ್ಯ ನಾಥ ಸ್ವಾಮೀಜಿಯವರು ಸೇರಿದಂತೆ ಮತ್ತಿತರ ಗಣ್ಯರು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.

ಕೋವಿಡ್ ಕೇರ್ ಸೆಂಟರ್ ನಲ್ಲಿ ನುರಿತ ತಜ್ಞರಿದ್ದು ಸೋಂಕಿತರಿಗೆ ಪ್ರತಿದಿನ ತಪಾಸಣೆ ನಡೆಸಿ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದಾರೆ.ಔಷಧಿ, ಹಾಸಿಗೆ, ಸಾಮಾನ್ಯ ಬೆಡ್ ಕೂಡ ಇಲ್ಲಿ ಲಭ್ಯವಿರಲಿದೆ.ಸೋಂಕಿತರನ್ನು ಉಪಚರಿಸಲು ನುರಿತ  ಸಹಾಯಕರು / ಸಹಾಯಕಿರು ಸಹಾ ಇರಲಿದ್ದು, ಪ್ರತಿದಿನ ಯೋಗ, ಪ್ರಾಣಾಯಾಮ ಸೇರಿದಂತೆ ಉತ್ತಮ ಆರೋಗ್ಯಕ್ಕೆ ಅಮೂಲ್ಯವಾದ ಸಲಹೆಗಳನ್ನು ನೀಡುವ ತಂಡ ಇರಲಿದೆ.

ಸೋಂಕಿತರು ಮನೆಯಿಂದ ಆಚೆ ಬಂದು ತಾವು ಏಕಾಂಗಿಯಲ್ಲ ಎಂಬುದನ್ನು ಹೋಗಲಾಡಿಸಲು ಮನೆಯ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ.ಇಡೀ ಕೋವಿಡ್ ಕೇರ್ ಸೆಂಟರ್ ಅನ್ನು ಪೂಜ್ಯ ಶ್ರೀಗಳೇ ಉಸ್ತುವಾರಿ ನೋಡಿಕೊಂಡಿದ್ದು ಯಾವುದೇ ರೀತಿಯ ಅನಾನುಕೂಲವಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಸೋಂಕು ಕಾಣಿಸಿಕೊಂಡ ತಕ್ಷಣವೇ ನಿಮ್ಮ ಅಕ್ಕಪಕ್ಕದಲ್ಲಿರುವ ಅಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ಮಾಡಿದರು.

ಸೋಂಕು ಕಾಣಿಸಿಕೊಂಡಿದೆ ಎಂದು ಯಾರೊಬ್ಬರೂ ಕೀಳಿರಿಮೆ ಬೆಳೆಸಿಕೊಳ್ಳಬೇಡಿ. ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಿದರೆ ಎಲ್ಲರೂ ಈ ಸೋಂಕಿನಿಂದ ಮುಕ್ತರಾಗಬಹುದು ಎಂದು ಹೇಳಿದರು.  ಪ್ರತಿದಿನ ಯೋಗ, ಪ್ರಾಣಾಯಾಮ ಮಾಡುವ ಮೂಲಕ ನಾವೆಲ್ಲರೂ ಕೊರೊನಾದಿಂದ ದೂರ ಇರಬಹುದು.ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡುವಂತೆ ಶ್ರೀಗಳು ಕಿವಿಮಾತು ಹೇಳಿದರು.

ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು,ಸ್ಯಾನಿಟೈಜರ್ ಬಳಕೆ, ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜೊತೆಗೆ ರಾಜ್ಯ ಸರ್ಕಾರದ ಮಾಗ9ಸೂಚಿಯನ್ನು ಪಾಲನೆ ಮಾಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಕಿರಣ್ ಗೌಡ ಡಾ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.

Source: Esanje

You Might Also Like

" data-numposts="10" data-width="">