ನವದೆಹಲಿ,ಏ.28-ದೇಶದಲ್ಲಿ ಮತ್ತೆ 3.60 ಲಕ್ಷ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆ 1.79 ಕೋಟಿ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 3,60,960 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1,79,97,267ಕ್ಕೆ ಏರಿಕೆಯಾಗಿದೆ. ಇದರ ಜತೆಗೆ ಮಹಾಮಾರಿಗೆ 3293 ಮಂದಿ ಬಲಿಯಾಗಿದ್ದಾರೆ.

1.79 ಕೋಟಿ ಮಂದಿಯಲ್ಲಿ ಈಗಾಗಲೇ 1,48ಕೋಟಿ ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇ.1.12ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶದಲ್ಲಿ ಉಲ್ಲೇಖವಾಗಿದೆ. ಶೇ.90ಕ್ಕೂ ಹೆಚ್ಚಿದ ಚೇತರಿಕೆ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ. ಚೇತರಿಕೆ ಪ್ರಮಾಣ ಶೇ.82.33ಕ್ಕೆ ಕುಸಿದಿರುವ ಪರಿಣಾಮ ಸಕ್ರಿಯ ಸೋಂಕಿನ ಪ್ರಮಾಣ 30 ಲಕ್ಷದತ್ತ ಮುಖ ಮಾಡಿದೆ.

ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಎರಡು ಲಕ್ಷದ ಗಡಿ ದಾಟಿದೆ. ನಿನ್ನೆ ಸಾವನ್ನಪ್ಪಿದ 3293 ಮಂದಿ ಸೇರಿದಂತೆ ಇದುವರೆಗೂ 201187 ಮಂದಿ ಕೊರೊನಾದಿಂದ ಮರಣಿಸಿದ್ದಾರೆ. ದಿನೇ ದಿನೇ ಸೋಂಕು ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಎರಡು ಕೋಟಿ ಗಡಿ ದಾಟುವ ಹಂತ ತಲುಪಿದೆ.

Source: Esanje

You Might Also Like

" data-numposts="10" data-width="">