ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಾಗಾಲೋಟ ಮುಂದುವರೆದಿದ್ದು ಹಿಂದಿನ ದಾಖಲೆಗಳನ್ನು ಮೀರಿಸಿದೆ. ರಾಜ್ಯಾದ್ಯಂತ ಇಂದು ಬರೋಬ್ಬರಿ 48296 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು ಇಂದು 217 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1523142 ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 15523ಕ್ಕೆ ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ 26756 ಜನರಿಗೆ ಕೊರೋನಾ ತಗುಲಿದ್ದು, 93 ಮಂದಿ ಪ್ರಾಣ ಬಿಟ್ಟಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 756740 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ 6375 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

ಇಂದು 14884 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 1124909 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಉಳಿದಂತೆ 382690 ಸಕ್ರಿಯ ಕೇಸ್​ಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

Source: Esanje

You Might Also Like

" data-numposts="10" data-width="">