ಪಾಟ್ನಾ : ಬಿಹಾರದ ಸುಪಾಲ್ ಜಿಲ್ಲೆಯ ತ್ರಿವೇಣಿಗಂಜ್ ನಲ್ಲಿ ದಿನಸಿ ಅಂಗಡಿ ಮಾಲಿಕ 20 ರೂ.ಯ ಪಾನ್ ಮಸಾಲ ಸಾಲ ಕೊಡದಿದ್ದಕ್ಕಾಗಿ ಆತನ ಕಿರಿಯ ಮಗನನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಭಾನುವಾರ ಮೃತರ ತಂದೆಯೊಂದಿಗೆ ಆರೋಪಿ ಅಜಿತ್ ಕುಮಾರ್ ಜಗಳವಾಡಿದ್ದ. ಮರುದಿನ ಸಹಚರರೊಂದಿಗೆ ಮರಳಿ ಜಗಳವಾಡಿದ ಅಜಿತ್ ತಂದೆಯ ಅನುಪಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ಮಗನ ಮೇಲೆ ಗುಂಡು ಹಾರಿಸಿ ಕೊಲೆಮಾಡಲಾಗಿದೆ. ಸಮೀಪದಲ್ಲಿದ್ದ ಪ್ರತ್ಯಕ್ಷದರ್ಶಿ ಮೃತನ ಅಣ್ಣ ಅಂಗಡಿಗೆ ಧಾವಿಸಿದರೂ, ಆ ಹೊತ್ತಿಗೆ ಕೊಲೆಗಾರರು ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. “ನಾವು ಹಲ್ಲೆಕೋರರನ್ನು ಗುರುತಿಸಿದ್ದೇವೆ ಮತ್ತು ಅಪರಾಧಿಗಳನ್ನು ಬಂಧಿಸಲು ಈ ಪ್ರದೇಶದಲ್ಲಿ ದಾಳಿ ನಡೆಸಲಾಗುತ್ತಿದೆ” ಎಂದು ಸುಪಾಲ್ ನ ಎಸ್ಡಿಎಂ ಶೇಖ್ ಹಸನ್ ಹೇಳಿದ್ದಾರೆ. 20 ರೂ. ಪಾನ್ ಮಸಾಲ ವಿಷಯಕ್ಕೆ ಸಂಬಂಧಿಸಿದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.

 

You Might Also Like

" data-numposts="10" data-width="">