ಬೆಂಗಳೂರು: ಸಿನಿ ಪ್ರಿಯರೇ, ನಿಮಗಿದೋ ಗುಡ್​ನ್ಯೂಸ್​. ಇಷ್ಟು ದಿನ ಥಿಯೇಟರ್​ಗಳಿಗೆ ಹೋಗಲು ಆಗುತ್ತಿಲ್ಲವಲ್ಲ, ಮತ್ತೆ ಮೊದಲಿನಂತೆ ಸಿನಿಮಾ ನೋಡೋದು ಯಾವಾಗ? ನೆಚ್ಚಿನ ನಟ-ನಟಿಯರ ಫಿಲಂ ಬಿಡುಗಡೆಗೆ ಕಾಲ ಎಂದು ಕೂಡಿಬರಲಿದೆ?… ಎಂದೆಲ್ಲ ಚರ್ಚಿಸುತ್ತಿದ್ದರೆ ಅದಕ್ಕೆಲ್ಲ ಬ್ರೇಕ್​ ಬೀಳುವ ಸಮಯ ಬಂದಿದೆ.

ಹೌದು, ಕರೊನಾ ಲಾಕ್​ಡೌನ್​ನಿಂದಾಗಿ ಸುಮಾರು 6 ತಿಂಗಳಿಂದ ಬಂದ್​ ಆಗಿದ್ದ ಚಿತ್ರಮಂದಿರಳು ಮತ್ತೆ ಬಾಗಿಲು ತೆರೆಯುವ ಕಾಲ ಸನಿಹದಲ್ಲಿದೆ. ಥಿಯೇಟರ್ ರೀ ಓಪನ್ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಗ್ಗೆ ‘ದಿಗ್ವಿಜಯ ನ್ಯೂಸ್’ಗೆ ವಾಣಿಜ್ಯ ಮಂಡಳಿ ಆಧ್ಯಕ್ಷ ಗುಬ್ಬಿ ಜೈರಾಜ್ ಮಾಹಿತಿ ನೀಟಿದ್ದಾರೆ. ಅಂದಹಾಗೆ ಚಿತ್ರಮಂದಿರಗಳ ರೀ ಓಪನ್ ಡೇಟ್​ ಯಾವಾಗ ಗೊತ್ತಾ?
ಮಂಗಳವಾರ ಸೌತ್ ಇಂಡಿಯಾ ವಾಣಿಜ್ಯ ಮಂಡಳಿಗಳ ಜೊತೆ ಜೂಮ್ ಮೀಟಿಂಗ್ ನಡೆದಿತ್ತು. ಆ ವೇಳೆ ಚಿತ್ರಮಂದಿರಗಳ ಮರುಆರಂಭದ ಬಗ್ಗೆ ಚರ್ಚೆಯಾಗಿದ್ದು, ಅಕ್ಟೋಬರ್ 1ನೇ ತಾರೀಖಿನಿಂದ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅಸ್ತು ಎಂದಿದೆ. ಈ ಬಗ್ಗೆ ಕೇಂದ್ರವು ಸೆಪ್ಟೆಂಬರ್ ಎರಡನೇ ವಾರದಲ್ಲಿ ಗೈಡ್ ಲೈನ್ಸ್ ಹೊರಡಿಸಲಿದೆ ಎಂದು ವಾಣಿಜ್ಯ ಮಂಡಳಿ ಆಧ್ಯಕ್ಷ ಗುಬ್ಬಿ ಜೈರಾಜ್ ತಿಳಿಸಿದ್ದಾರೆ.

ಅತ್ತ ಕೇಂದ್ರ ಅಸ್ತು ಎನ್ನುತ್ತಿದ್ದಂತೆ, ಇತ್ತ ಆರು ತಿಂಗಳಿಂದ ಬಂದ್ ಆಗಿರುವ ಚಿತ್ರಮಂದಿರಗಳು ಮತ್ತೆ ಕಾರ್ಯಾರಂಭ ಮಾಡಲು ಸಜ್ಜಾಗುತ್ತಿವೆ.

You Might Also Like

" data-numposts="10" data-width="">