ಮುಂಬೈ, ಜೂ. 8- ಅಮೆರಿಕಾ ಹಾಗೂ ಚೀನಾದ ನಡುವಿನ
ಮುಂಬೈ, ಜೂ. 8- ಅಮೆರಿಕಾ ಹಾಗೂ ಚೀನಾದ ನಡುವಿನ ಸಂಘರ್ಷ, ವ್ಯಾಪಾರ ಬಿಕ್ಕಟ್ಟು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವುದರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ನಿರಂತರ 19 ದಿನಗಳಿಂದಲೂ ಏರಿಕೆಯಾಗುತ್ತಿದ್ದು ಇದರ ನಡುವೆಯೇ ಚಿನ್ನ ಹಾಗೂ ಬೆಳ್ಳಿ ಬೆಲೆಯು ಗಗನಮುಖಿಯಾಗುತ್ತಿರುವುದು ಜನರ ಜೇಬಿಗೆ ಹೊರೆಯಾಗಿದೆ.
ಲಾಕ್ಡೌನ್ ವೇಳೆ ಚಿನ್ನ ಹಾಗೂ ಬೆಳ್ಳಿ ಖರೀದಿಸುವವರೇ ಇಲ್ಲದೆ ಅದರ ಬೆಲೆಯಲ್ಲಿ ಇಳಿಮುಖವಾಗಿತ್ತಾದರೂ ಲಾಕ್ಡೌನ್ ಸಡಿಲಿಕೆ ನಂತರ ಚಿನ್ನ ಕೊಳ್ಳಲು ಗ್ರಾಹಕರು ಮನಸ್ಸು ಮಾಡಿರುವುದರಿಂದ ಚಿನ್ನದ ಬೆಲೆಯು ದಿನೇದಿನೇ ಏರಿಕೆಯಾಗುತ್ತಿದೆ.
ಇಂದು ಕೂಡ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 42.30 ರೂ.ಗಳು ಏರಿಕೆಯಾಗಿರುವುದರಿಂದ ಪ್ರತಿ ಹತ್ತು ಗ್ರಾಂ ಚಿನ್ನ ಕೊಳ್ಳಲು 50 ಸಾವಿರವರೆಗೂ ವ್ಯಯಿಸಬೇಕಾಗಿದೆ. ದೆಹಲಿಯಲ್ಲೂ ಹಳದಿ ಲೋಹದ ಬೆಲೆಯು ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯು 49,352 ರೂ.ಗಳಿಗೆ ಮುಟ್ಟಿದೆ.
-
ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ನ.26-27 ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ
Stay Connected
Get Newsletter
Subscribe to our newsletter to get latest news, popular news and exclusive updates.